*sarala saṃskṛta 2:
*ಸಂಸ್ಕೃತ 2:
*ನಾಮವಿಶೇಷಣ*
ವ್ಯಕ್ತಿಯ ಅಥವಾ ವಸ್ತುವಿನ ವಿಶೇಷತೆ/ ಗುಣಗಳನ್ನು ಹೇಳುವಂತಹ ಪದಗಳನ್ನು ನಾಮವಿಶೇಷಣ ಎಂದು ಕರೆಯುತ್ತೇವೆ.
ಉದಾಹರಣೆ:
1) *ಸುಂದರನಾದ* ರಾಮನು ಬಂದನು.
2) *ಬಲಿಷ್ಠನಾದ* ಭೀಮನು ಬಂದನು.
ಇದರಲ್ಲಿ ಭೀಮನನ್ನು ವರ್ಣಿಸುವ *ಬಲಿಷ್ಠನಾದ* ಪದವು ನಾಮ ವಿಶೇಷಣ ಆಗುತ್ತದೆ.
3) *ಸಿಹಿಯಾದ* ಜಾಮೂನು ರುಚಿಕರವಾಗಿದೆ.
ಇದರಲ್ಲಿ ಜಾಮೂನು ಎಂಬುದು ನಾಮಪದವಾದರೆ, *ಸಿಹಿಯಾದ* ಎಂಬುದು ನಾಮ ವಿಶೇಷಣ ಆಗುತ್ತದೆ.
4) *ಗಟ್ಟಿಮುಟ್ಟಾದ* ಮೇಜನ್ನು ತಂದರು.
ಇದರಲ್ಲಿ ಮೇಜು ಎಂಬುದು ನಾಮಪದವಾದರೆ, *ಗಟ್ಟಿಮುಟ್ಟಾದ* ಎಂಬುದು ನಾಮವಿಶೇಷಣವಾಗುತ್ತದೆ.
*ಕ್ರಿಯಾ ವಿಶೇಷಣ*
ಕ್ರಿಯೆಯ ವಿಶೇಷತೆ/ ಗುಣಗಳನ್ನು ವಿವರಿಸುವ ಪದಗಳು ಕ್ರಿಯಾ ವಿಶೇಷಣ ಎನಿಸಿಕೊಳ್ಳುತ್ತದೆ.
ಉದಾಹರಣೆ:
1) ಭೀಮನು *ವೇಗವಾಗಿ* ಓಡಿದನು.
ಇದರಲ್ಲಿ ಓಡಿದನು ಎಂಬುದು ಕ್ರಿಯೆಯನ್ನು ಸೂಚಿಸುವ ಪದ, ವೇಗವಾಗಿ ಎಂಬುದು ಆ ಕ್ರಿಯೆಯ ವಿಶೇಷತೆಯನ್ನು ಸೂಚಿಸುತ್ತದೆ. ಆದ್ದರಿಂದ *ವೇಗವಾಗಿ* ಎಂಬುದು ಕ್ರಿಯಾ ವಿಶೇಷಣ ಆಗುತ್ತದೆ.
2) ಕೃಷ್ಣನು ಕೊಳಲನ್ನು *ಸುಂದರವಾಗಿ* ನುಡಿಸಿದನು.
ಇದರಲ್ಲಿ ನುಡಿಸಿದನು ಕ್ರಿಯಾಪದವಾದರೆ, *ಸುಂದರವಾಗಿ* ಎಂಬುದು ಕ್ರಿಯಾ ವಿಶೇಷಣವಾಗುತ್ತದೆ.
3) ಮನೆಕೆಲಸವನ್ನು *ಅಚ್ಚುಕಟ್ಟಾಗಿ* ಮಾಡಿ ಮುಗಿಸಿದಳು.
ಇದರಲ್ಲಿ ಮಾಡಿ ಕ ಅಪ್ರಧಾನ ಕ್ರಿಯಾಪದವಾದರೆ, *ಅಚ್ಚುಕಟ್ಟಾಗಿ* ಎಂಬುದು ಕ್ರಿಯಾವಿಶೇಷಣ ಆಗುತ್ತದೆ.
4) ಗುರುಗಳು ಅದ್ಭುತವಾಗಿ ಮಾತನಾಡಿದರು.
ಇದರಲ್ಲಿ ಮಾತನಾಡಿದರು ಎಂಬುದು ಕ್ರಿಯಾಪದವಾದರೆ, *ಅದ್ಬುತವಾಗಿ* ಎನ್ನುವುದು ಕ್ರಿಯಾವಿಶೇಷಣ ಆಗುತ್ತದೆ.
*ಪ್ರಧಾನ ಕ್ರಿಯಾಪದ*
ಇದನ್ನು "ಪ್ರಧಾನ ಕ್ರಿಯಾಪದ" ಎಂದು ಕರೆಯಲು ಮತ್ತೊಂದು ಕಾರಣವೇನೆಂದರೆ, 'ಪ್ರಧಾನ ಕ್ರಿಯಾಪದ'ವು ವಾಕ್ಯದ ಕೇಂದ್ರ ಬಿಂದು ಆಗಿರುತ್ತದೆ. ಹಾಗಾಗಿ ಒಂದು ವಾಕ್ಯದಲ್ಲಿ ಒಂದೇ ಪ್ರಧಾನ ಕ್ರಿಯಾಪದ ಇರುತ್ತದೆ.
(ಅಪ್ರಧಾನ ಕ್ರಿಯಾಪದ ಎಷ್ಟು ಬೇಕಾದರೂ ಇರಬಹುದು)
ಆದರೆ *ಪ್ರಧಾನಕ್ರಿಯಾ ಪದವೇ ವಾಕ್ಯದ ಕೇಂದ್ರ ಬಿಂದು* ಹೇಗೆ ಆಗಿರುತ್ತದೆ ಎಂದು ನೋಡೋಣ.
ಉದಾಹರಣೆ:
1) ರಾಮನು ರಾವಣನನ್ನು ಬಾಣಗಳಿಂದ ಲಂಕೆಯಲ್ಲಿ ಕೊಂದನು.
ಇದರಲ್ಲಿ *ಕೊಂದನು* ಪ್ರಧಾನ ಕ್ರಿಯಾಪದ. .
ಕೊಂದನು.
ಯಾರು ಕೊಂದನು?
ರಾಮನು ಕೊಂದನು.
ಯಾರನ್ನು ಕೊಂದನು?
ರಾವಣನನ್ನು ಕೊಂದನು.
ಎಲ್ಲಿ ಕೊಂದನು?
ಲಂಕೆಯಲ್ಲಿ ಕೊಂದನು.
ಹೇಗೆ ಕೊಂದನು?
ಬಾಣಗಳಿಂದ ಕೊಂದನು.
2) ಮೇನಕೆಯು ಇಂದ್ರನ ಆಸ್ಥಾನದಲ್ಲಿ ಎಲ್ಲ ಸಭಿಕರ ನಡುವೆ ಸುಂದರವಾಗಿ *ನರ್ತಿಸಿದಳು*
ಇದರಲ್ಲಿ *ನರ್ತಿಸಿದಳು* ಪ್ರಧಾನ ಕ್ರಿಯಾಪದ.
ನರ್ತಿಸಿದಳು.
ಯಾರು ನರ್ತಿಸಿದರು?
ಮೇನಕೆ ನರ್ತಿಸಿದಳು.
ಎಲ್ಲಿ ನರ್ತಿಸಿದಳು?
ಇಂದ್ರನ ಆಸ್ಥಾನದಲ್ಲಿ ನರ್ತಿಸಿದಳು.
ಯಾರ ಮುಂದೆ ನರ್ತಿಸಿದಳು?
ಸಭಿಕರ ಮುಂದೆ ನರ್ತಿಸಿದಳು.
ಹೇಗೆ ನರ್ತಿಸಿದಳು?
ಸುಂದರವಾಗಿ ನರ್ತಿಸಿದಳು.
3) ಬೇಡನು ಕಾಡಿನಲ್ಲಿ ವ್ಯಘ್ರಗೊಂಡಿದ್ದ ಒಂಟಿ ಸಲಗವನ್ನು *ಸೆರೆ ಹಿಡಿದನು*
ಇದರಲ್ಲಿ *ಸೆರೆಹಿಡಿದನು* ಎಂಬುದು ಪ್ರಧಾನ ಕ್ರಿಯಾಪದವಾಗಿದೆ.
ಸೆರೆಹಿಡಿದನು.
ಯಾರು ಸೆರೆ ಹಿಡಿದನು?
ಬೇಡನು ಸೆರೆಹಿಡಿದನು.
ಯಾವುದನ್ನು ಸೆರೆಹಿಡಿದನು?
ಸಲಗವನ್ನು ಸೆರೆಹಿಡಿದನು.
ಎಂತಹಾ ಸಲಗವನ್ನು ಸೆರೆಹಿಡಿದನು?
ವ್ಯಘ್ರವಾಗಿದ್ದ ಒಂಟಿ ಸಲಗವನ್ನು ಸೆರೆಹಿಡಿದನು
ಎಲ್ಲಿ ಸೆರೆ ಹಿಡಿದನು?
ಕಾಡಿನಲ್ಲಿ ಸೆರೆಹಿಡಿದನು.
*saṃskṛta 2:
*nāmaviśeṣaṇa*
vyaktiya athavā vastuvina viśeṣatĕ/ guṇagal̤annu hel̤uvaṃtaha padagal̤annu nāmaviśeṣaṇa ĕṃdu karĕyuttevĕ.
udāharaṇĕ:
1) *suṃdaranāda* rāmanu baṃdanu.
2) *baliṣṭhanāda* bhīmanu baṃdanu.
idaralli bhīmanannu varṇisuva *baliṣṭhanāda* padavu nāma viśeṣaṇa āguttadĕ.
3) *sihiyāda* jāmūnu rucikaravāgidĕ.
idaralli jāmūnu ĕṃbudu nāmapadavādarĕ, *sihiyāda* ĕṃbudu nāma viśeṣaṇa āguttadĕ.
4) *gaṭṭimuṭṭāda* mejannu taṃdaru.
idaralli meju ĕṃbudu nāmapadavādarĕ, *gaṭṭimuṭṭāda* ĕṃbudu nāmaviśeṣaṇavāguttadĕ.
*kriyā viśeṣaṇa*
kriyĕya viśeṣatĕ/ guṇagal̤annu vivarisuva padagal̤u kriyā viśeṣaṇa ĕnisikŏl̤l̤uttadĕ.
udāharaṇĕ:
1) bhīmanu *vegavāgi* oḍidanu.
idaralli oḍidanu ĕṃbudu kriyĕyannu sūcisuva pada, vegavāgi ĕṃbudu ā kriyĕya viśeṣatĕyannu sūcisuttadĕ. āddariṃda *vegavāgi* ĕṃbudu kriyā viśeṣaṇa āguttadĕ.
2) kṛṣṇanu kŏl̤alannu *suṃdaravāgi* nuḍisidanu.
idaralli nuḍisidanu kriyāpadavādarĕ, *suṃdaravāgi* ĕṃbudu kriyā viśeṣaṇavāguttadĕ.
3) manĕkĕlasavannu *accukaṭṭāgi* māḍi mugisidal̤u.
idaralli māḍi ka apradhāna kriyāpadavādarĕ, *accukaṭṭāgi* ĕṃbudu kriyāviśeṣaṇa āguttadĕ.
4) gurugal̤u adbhutavāgi mātanāḍidaru.
idaralli mātanāḍidaru ĕṃbudu kriyāpadavādarĕ, *adbutavāgi* ĕnnuvudu kriyāviśeṣaṇa āguttadĕ.
*pradhāna kriyāpada*
idannu "pradhāna kriyāpada" ĕṃdu karĕyalu mattŏṃdu kāraṇavenĕṃdarĕ, 'pradhāna kriyāpada'vu vākyada keṃdra biṃdu āgiruttadĕ. hāgāgi ŏṃdu vākyadalli ŏṃde pradhāna kriyāpada iruttadĕ.
(apradhāna kriyāpada ĕṣṭu bekādarū irabahudu)
ādarĕ *pradhānakriyā padave vākyada keṃdra biṃdu* hegĕ āgiruttadĕ ĕṃdu noḍoṇa.
udāharaṇĕ:
1) rāmanu rāvaṇanannu bāṇagal̤iṃda laṃkĕyalli kŏṃdanu.
idaralli *kŏṃdanu* pradhāna kriyāpada. .
kŏṃdanu.
yāru kŏṃdanu?
rāmanu kŏṃdanu.
yārannu kŏṃdanu?
rāvaṇanannu kŏṃdanu.
ĕlli kŏṃdanu?
laṃkĕyalli kŏṃdanu.
hegĕ kŏṃdanu?
bāṇagal̤iṃda kŏṃdanu.
2) menakĕyu iṃdrana āsthānadalli ĕlla sabhikara naḍuvĕ suṃdaravāgi *nartisidal̤u*
idaralli *nartisidal̤u* pradhāna kriyāpada.
nartisidal̤u.
yāru nartisidaru?
menakĕ nartisidal̤u.
ĕlli nartisidal̤u?
iṃdrana āsthānadalli nartisidal̤u.
yāra muṃdĕ nartisidal̤u?
sabhikara muṃdĕ nartisidal̤u.
hegĕ nartisidal̤u?
suṃdaravāgi nartisidal̤u.
3) beḍanu kāḍinalli vyaghragŏṃḍidda ŏṃṭi salagavannu *sĕrĕ hiḍidanu*
idaralli *sĕrĕhiḍidanu* ĕṃbudu pradhāna kriyāpadavāgidĕ.
sĕrĕhiḍidanu.
yāru sĕrĕ hiḍidanu?
beḍanu sĕrĕhiḍidanu.
yāvudannu sĕrĕhiḍidanu?
salagavannu sĕrĕhiḍidanu.
ĕṃtahā salagavannu sĕrĕhiḍidanu?
vyaghravāgidda ŏṃṭi salagavannu sĕrĕhiḍidanu
ĕlli sĕrĕ hiḍidanu?
kāḍinalli sĕrĕhiḍidanu.
Sarala Sanskrit -2
Adjective (Nāma-viśeṣaṇa)
Words that describe the qualities or characteristics of a person or object are called adjectives (nāma-viśeṣaṇa).
Examples:
1. The beautiful Rāma came.
Here, the word "beautiful" describes Rāma and is therefore an adjective.
2. The strong Bhīma came.
Here, "strong" is an adjective describing Bhīma.
3. The sweet jamun was tasty.
In this sentence, jamun is a noun, and "sweet" is the adjective describing it.
4. They brought a sturdy table.
Here, table is a noun, and "sturdy" is an adjective describing it.
Adverb (Kriyā-viśeṣaṇa)
Words that describe or qualify an action (verb) are called adverbs (kriyā-viśeṣaṇa).
Examples:
1. Bhīma ran quickly.
Here, ran is the verb, and "quickly" tells how he ran — it is an adverb.
2. Kṛṣṇa played the flute beautifully.
Here, played is the verb, and "beautifully" is the adverb describing the action.
3. She completed the housework neatly.
Here, completed is the main verb, and "neatly" is the adverb.
4. The teacher spoke wonderfully.
Spoke is the verb, and "wonderfully" is the adverb describing the manner of speaking.
Main Verb (Pradhāna-Kriyāpada)
The main verb is called "Pradhāna Kriyāpada" because it acts as the central point of the sentence.
There is only one main verb in a sentence, though there may be multiple auxiliary or supporting verbs.
Let’s see how the main verb becomes the central component of a sentence:
Example 1:
Rāma killed Rāvaṇa with arrows in Laṅkā.
Here, "killed" is the main verb.
Who killed? — Rāma killed.
Whom did he kill? — Rāvaṇa.
Where did he kill? — In Laṅkā.
How did he kill? — With arrows.
Example 2:
Menakā danced beautifully in Indra's court in front of all the attendees.
Here, "danced" is the main verb.
Who danced? — Menakā danced.
Where did she dance? — In Indra’s court.
In front of whom? — In front of the attendees.
How did she dance? — Beautifully.
Example 3:
The hunter captured the lone elephant, which was like a tiger, in the forest.
Here, "captured" is the main verb.
Who captured? — The hunter.
What did he capture? — The elephant.
What kind of elephant? — A lone elephant that was like a tiger.
Where did he capture it? — In the forest.
This breakdown shows how the main verb functions as the heart of the sentence, connecting the subject, object, place, manner, and other details.

Comments
Post a Comment