*saṃskṛta 3:



*ಸಂಸ್ಕೃತ 3:

*ವಚನಗಳು*

ಕನ್ನಡದಲ್ಲಿ: ಏಕವಚನ ಮತ್ತು ಬಹುವಚನ.

ಇಂಗ್ಲೀಷಿನಲ್ಲಿ: singular and plural.

ಸಂಸ್ಕೃತದಲ್ಲಿ : ಏಕವಚನ, ಬಹುವಚನ ಅಲ್ಲದೇ ಇವೆರಡರ ಮಧ್ಯೆ ದ್ವಿವಚನ ಅಂತಲೂ ಇದೆ.

ಸಂಸ್ಕೃತ: "ಏಕವಚನ, ದ್ವಿವಚನ ಮತ್ತು ಬಹುವಚನ"

ಒಬ್ಬರಿಗೆ: *ಏಕವಚನ*

ಇಬ್ಬರಿಗೆ: *ದ್ವಿವಚನ*

ಹೆಚ್ಚು ಜನರಿಗೆ : *ಬಹುವಚನ*


*ಕಾಲಗಳು*

ಕನ್ನಡದಲ್ಲಿ: ಭೂತ, ಭವಿಷ್ಯ ಮತ್ತು ವರ್ತಮಾನ.

ಇಂಗ್ಲೀಷಿನಲ್ಲಿ: past, present and furlture.

ಸಂಸ್ಕೃತದಲ್ಲಿ: ಭೂತ, ಭವಿಷ್ಯ ಮತ್ತು ವರ್ತಮಾನ.


*ಲಿಂಗಗಳು*

ಕನ್ನಡದಲ್ಲಿ: ಸ್ತ್ರೀಲಿಂಗ, ಪುಲ್ಲಿಂಗ, ನಪುಂಸಕ ಲಿಂಗ.

ಸಂಸ್ಕೃತದಲ್ಲಿ: ಸ್ತ್ರೀಲಿಂಗ, ಪುಲ್ಲಿಂಗ, ನಪುಂಸಕ ಲಿಂಗ


*ಕನ್ನಡದಲ್ಲಿ ಲಿಂಗ ನಿರ್ಣಯ* 


ಕನ್ನಡ ವ್ಯಾಕರಣದಲ್ಲಿ ಲಿಂಗವು ವಸ್ತುವಿನ ಲಿಂಗದಿಂದ ನಿರ್ಧಾರವಾಗುತ್ತದೆ. 


ಉದಾಹರಣೆಗೆ *ಕಲ್ಲು ಬಿತ್ತು* ಎನ್ನುವ ಪದದಲ್ಲಿ ಕಲ್ಲು ನಪುಂಸಕ ಲಿಂಗವಾದ್ದರಿಂದ ಅದನ್ನು ಹೇಳುವ ಪದವು ನಪುಂಸಕಲಿನವಾಗುತ್ತದೆ  *ಬಿತ್ತು* ಎಂತಲೇ ಹೇಳಬೇಕಾಗುತ್ತದೆ. ಬಿದ್ದನು ಅಥವಾ ಬಿದ್ದಳು ಎಂದಾಗುವುದಿಲ್ಲ‌. 


*ಹುಡುಗ ಬಿದ್ದನು* ಇದರಲ್ಲಿ ಹುಡುಗ ಪುಲ್ಲಿಂಗವಾದ್ದರಿಂದ ಬಿದ್ದನು ಎಂದು ಹೇಳಬೇಕಾಗುತ್ತದೆ.


*ಹುಡುಗಿ ಬಿದ್ದಳು* ಇದರಲ್ಲಿ ಹುಡುಗಿ ಸ್ತ್ರೀಲಿಂಗವಾದ್ದರಿಂದ ಬಿದ್ದಳು ಎಂದು ಹೇಳಬೇಕಾಗುತ್ತದೆ. 


*ಮಾವಿನಹಣ್ಣು ಬಿದ್ದಿತು* ಇದರಲ್ಲಿ ಮಾವಿನಹಣ್ಣು ನಪುಂಸಕ ಲಿಂಗವಾದ್ದರಿಂದ ಬಿದ್ದಿತು ಎಂದೇ ಹೇಳಬೇಕಾಗುತ್ತದೆ. 


*ಸಂಸ್ಕೃತದಲ್ಲಿ ಲಿಂಗ ನಿರ್ಣಯ*


ಆದರೆ ಸಂಸ್ಕೃತದಲ್ಲಿ ಹೀಗಿಲ್ಲ. ಇಲ್ಲಿ ವಸ್ತುವಿನ ಲಿಂಗವು ಮತ್ತು ಪದದ ಲಿಂಗವು ಸಮಾನವಾಗಿರಬೇಕೆಂಬ ನಿಯಮವಿಲ್ಲ.


ಉದಾಹರಣೆ: 


1) *ಕಲ್ಲು ಬಿದ್ದಿತು* ಎಂಬ ವಾಕ್ಯವನ್ನು ತೆಗೆದುಕೊಂಡರೆ ಸಂಸ್ಕೃತದಲ್ಲಿ *ಕಲ್ಲು-ಎಂಬ ಅರ್ಥವನ್ನು ಕೊಡುವ * ಸ್ಥಾಣು* ಎಂಬ ಪದವು ಪುಲ್ಲಿಂಗವಾಗುತ್ತದೆ. 


2) *ನಾಲಿಗೆ* ಎಂಬ ಪದವು ಬೇರೆ ಭಾಷೆಯಲ್ಲಿ ನಪುಂಸಕ ಲಿಂಗವಾಗುತ್ತದೆ‌‌. ಹಾಗಾಗಿ ನಾಲಿಗೆ ಬಿದ್ದಿತು ಎನ್ನುತ್ತೇವೆ. ನಾಲಿಗೆ ಬಿದ್ದಳು / ಬಿದ್ದನು ಎಂದು ಹೇಳುವುದಿಲ್ಲ. ಆದರೆ ಸಂಸ್ಕೃತದಲ್ಲಿ *ನಾಲಿಗೆ-ಎಂಬ ಅರ್ಥವನ್ನು ಹೇಳುವ *ಜಿಹ್ವಾ* ಎನ್ನುವ ಪದವು ಸ್ತ್ರೀಲಿಂಗವಾಗುತ್ತದೆ. 


3) ನೇತ್ರಂ, ಶಿರಃ,   ಇವುಗಳು ಸಂಸ್ಕೃತದಲ್ಲಿ ಸಹ ನಪುಂಸಕ ಲಿಂಗವೇ ಆಗಿರುತ್ತದೆ. ಆದರೆ ಪ್ರಾಣಿ-ಪಕ್ಷಿಗಳಲ್ಲಿ, ಮುಖ್ಯವಾದ ಪುಲ್ಲಿಂಗಗಳು, ಸ್ತ್ರೀಲಿಂಗಗಳ ಪದಗಳು ಅದೇ ಲಿಂಗದ್ದೇ ಆಗಿರುತ್ತದೆ. 


4) ರಾಮ ಎಂಬ ಪದ-ಪುಲ್ಲಿಂಗ

ಸೀತಾ-ಎಂಬ ಪದವು ಸ್ತ್ರೀಲಿಂಗ


ಈಗ ಪ್ರಶ್ನೆ ಎಂದರೆ ಪದಗಳ ಲಿಂಗ ಕಂಡುಹಿಡಿಯುವುದು ಹೇಗೆ? ಅಮರಕೋಶದಲ್ಲಿ ಯಾವ ಪದವು ಯಾವ ಲಿಂಗ ಎಂದು ತಿಳಿಸಲಾಗಿದೆ. ಆದರೆ ನಾವು ಕಲಿಯುವುದು ಹೇಗೆ? ಇದನ್ನು ನಾವು ಅಧ್ಯಯನ‌ ಮಾಡುತ್ತಲೇ ಅನುಭವದಿಂದ ಕಲಿಯಬೇಕಾಗುತ್ತದೆ. 


ಆದರೆ ತಿಳಿಯಬೇಕಾದ ಮುಖ್ಯ ವಿಚಾರ ಏನೆಂದರೆ: 


*ಸಂಸ್ಕೃತದಲ್ಲಿ ವಸ್ತುವಿನ ಲಿಂಗ ಮತ್ತು ಪದದ ಲಿಂಗ ಎರಡೂ ಸಮಾನವಾಗಿ ಇರಬೇಕೆಂದು ನಿಯಮವಿಲ್ಲ* 


*saṃskṛta 3:

*vacanagal̤u*
kannaḍadalli: ekavacana mattu bahuvacana.
iṃglīṣinalli: singular and plural.
saṃskṛtadalli : ekavacana, bahuvacana allade ivĕraḍara madhyĕ dvivacana aṃtalū idĕ.
saṃskṛta: "ekavacana, dvivacana mattu bahuvacana"
ŏbbarigĕ: *ekavacana*
ibbarigĕ: *dvivacana*
hĕccu janarigĕ : *bahuvacana*

*kālagal̤u*
kannaḍadalli: bhūta, bhaviṣya mattu vartamāna.
iṃglīṣinalli: past, present and furlture.
saṃskṛtadalli: bhūta, bhaviṣya mattu vartamāna.

*liṃgagal̤u*
kannaḍadalli: strīliṃga, pulliṃga, napuṃsaka liṃga.
saṃskṛtadalli: strīliṃga, pulliṃga, napuṃsaka liṃga

*kannaḍadalli liṃga nirṇaya* 

kannaḍa vyākaraṇadalli liṃgavu vastuvina liṃgadiṃda nirdhāravāguttadĕ. 

udāharaṇĕgĕ *kallu bittu* ĕnnuva padadalli kallu napuṃsaka liṃgavāddariṃda adannu hel̤uva padavu napuṃsakalinavāguttadĕ  *bittu* ĕṃtale hel̤abekāguttadĕ. biddanu athavā biddal̤u ĕṃdāguvudilla. 

*huḍuga biddanu* idaralli huḍuga pulliṃgavāddariṃda biddanu ĕṃdu hel̤abekāguttadĕ.

*huḍugi biddal̤u* idaralli huḍugi strīliṃgavāddariṃda biddal̤u ĕṃdu hel̤abekāguttadĕ. 

*māvinahaṇṇu bidditu* idaralli māvinahaṇṇu napuṃsaka liṃgavāddariṃda bidditu ĕṃde hel̤abekāguttadĕ. 

*saṃskṛtadalli liṃga nirṇaya*

ādarĕ saṃskṛtadalli hīgilla. illi vastuvina liṃgavu mattu padada liṃgavu samānavāgirabekĕṃba niyamavilla.

udāharaṇĕ: 

1) *kallu bidditu* ĕṃba vākyavannu tĕgĕdukŏṃḍarĕ saṃskṛtadalli *kallu-ĕṃba arthavannu kŏḍuva * sthāṇu* ĕṃba padavu pulliṃgavāguttadĕ. 

2) *nāligĕ* ĕṃba padavu berĕ bhāṣĕyalli napuṃsaka liṃgavāguttadĕ. hāgāgi nāligĕ bidditu ĕnnuttevĕ. nāligĕ biddal̤u / biddanu ĕṃdu hel̤uvudilla. ādarĕ saṃskṛtadalli *nāligĕ-ĕṃba arthavannu hel̤uva *jihvā* ĕnnuva padavu strīliṃgavāguttadĕ. 

3) netraṃ, śiraḥ,   ivugal̤u saṃskṛtadalli saha napuṃsaka liṃgave āgiruttadĕ. ādarĕ prāṇi-pakṣigal̤alli, mukhyavāda pulliṃgagal̤u, strīliṃgagal̤a padagal̤u ade liṃgadde āgiruttadĕ. 

4) rāma ĕṃba pada-pulliṃga
sītā-ĕṃba padavu strīliṃga

īga praśnĕ ĕṃdarĕ padagal̤a liṃga kaṃḍuhiḍiyuvudu hegĕ? amarakośadalli yāva padavu yāva liṃga ĕṃdu til̤isalāgidĕ. ādarĕ nāvu kaliyuvudu hegĕ? idannu nāvu adhyayana māḍuttale anubhavadiṃda kaliyabekāguttadĕ. 

ādarĕ til̤iyabekāda mukhya vicāra enĕṃdarĕ: 

*saṃskṛtadalli vastuvina liṃga mattu padada liṃga ĕraḍū samānavāgi irabekĕṃdu niyamavilla*


Sanskrit 3:

Numbers (Vachana-s):
In Kannada: singular (ēkavachana) and plural (bahuvachana)
In English: singular and plural
In Sanskrit: Along with singular (ēkavachana) and plural (bahuvachana), there is also a third number called dual (dvivachana).
So, in Sanskrit:

ēkavachana – for one person/object

dvivachana – for two persons/objects

bahuvachana – for more than two persons/objects



Tenses (Kāla-s):
In Kannada: past (bhūta), future (bhaviṣya), and present (vartamāna)
In English: past, present, and future
In Sanskrit: bhūta (past), bhaviṣya (future), and vartamāna (present)



Genders (Liṅga-s):
In Kannada: masculine (puṁliṅga), feminine (strīliṅga), and neuter (napuṁsaka liṅga)
In Sanskrit: puṁliṅga, strīliṅga, and napuṁsaka liṅga


Gender Determination in Kannada:
In Kannada grammar, the gender of a word is decided based on the natural gender of the object.

For example:

In "kallu bittu" (the stone fell), since kallu (stone) is neuter gender, the verb must be in neuter form – bittu.
You cannot say biddanu or biddalu.

"Huḍuga biddanu" – Here, huḍuga (boy) is masculine, so the verb must be biddanu.

"Huḍugi biddalu" – Here, huḍugi (girl) is feminine, so the verb is biddalu.

"Māvinahannu bidditu" – Here, māvinahannu (mango fruit) is neuter, so the verb must be bidditu.


Gender Determination in Sanskrit:
However, this is not the case in Sanskrit.
In Sanskrit, there is no fixed rule that the gender of the object and the gender of the word must be the same.

Examples:

1. Take the sentence "kallu bidditu" (the stone fell). In Sanskrit, the word sthāṇu conveys the meaning of "stone" and is masculine in gender.


2. The word nālige (tongue) is neuter in many other languages. So we say "nālige bidditu" and not biddalu or biddanu. But in Sanskrit, the word jihvā (tongue) is feminine.


3. Words like netram (eye), śiraḥ (head), etc., are neuter in Sanskrit.


4. But for living beings like animals and birds, the grammatical gender generally aligns with the natural gender:

Rāma – masculine (puṁliṅga)

Sītā – feminine (strīliṅga)



Now the question arises: How do we identify the gender of words in Sanskrit?
The Amarakosha (a classical Sanskrit lexicon) provides information about the gender of each word.
But for learners, how do we grasp this?
We need to study and learn this gradually through experience and practice.


However, the key point to remember is this:
In Sanskrit, there is no rule that the gender of the object and the gender of the word must match.


Comments

Popular posts from this blog

saṃskṛta 1

*sarala saṃskṛta 2:

saṃskṛta 4: