saṃskṛta 7:
*ಸಂಸ್ಕೃತ 7: ಸಂಸ್ಕೃತದಲ್ಲಿ ಶಬ್ದಗಳನ್ನು ಎರಡು ರೀತಿಯಾಗಿ ವಿಂಗಡನೆ ಮಾಡುತ್ತೇವೆ. 1) *ಅಜಂತ ಶಬ್ದಗಳು* - *ಅಚ್ ಎಂಬ ಅಕ್ಷರಗಳು* ಅಂತ್ಯದಲ್ಲಿ ಇರುವಂತಹಾ ಶಬ್ದಗಳು. ಅಚ್ is an abbreviations for ಸ್ವರಗಳು. ಅ, ಆ, ಇ, ಈ, ಉ, ಊ, ಋ, ಎ, ಐ, ಒ, ಔ ಇವುಗಳನ್ನು abbreviation ನಲ್ಲಿ *ಅಚ್* ಎಂದು ಕರೆಯುತ್ತೇವೆ. ಉದಾ: ರಾಮ = ರ್+ಆ+ಮ್+ಅ ಹರಿ= ಹ್+ಅ+ರ್+ಇ ಗುರು= ಗ್+ಉ+ರ್+ಉ ರಮ= ರ್+ಅ+ಮ್+ಅ *ಅಜಂತ ಪದಗಳು* : ಸ್ವರಾಕ್ಷರ ಕೊನೆಯಲ್ಲಿ ಇರುವಂತಹಾ ಪದಗಳು. ಇವುಗಳಲ್ಲಿ ಬಹಳ ವಿಧಗಳಿವೆ: 1) ಅಕಾರಾಂತ, ಆಕಾರಾಂತ ಉದಾ: ರಾಮ, ರಾಮಾ 2) ಇಕಾರಾಂತ, ಈಕಾರಾಂತ ಉದಾ: ಹರಿ, ಗೌರೀ 3) ಉಕಾರಾಂತ, ಊಕಾರಾಂತ ಉದಾ: ಗುರು, ವಧೂ 4) ಋಕಾರಾಂತ ಉದಾ: ಮಾತೃ 5) , ಓಕಾರಾಂತ ಉದಾ: ಗೋ *ಸಂಸ್ಕೃತದಲ್ಲಿ ಹ್ರಸ್ವ ಎ ಮತ್ತು ಒ ಇಲ್ಲ* 2) ಹಲಂತ ಶಬ್ದಗಳು- ಹಲ್ ಎಂದರೆ ವ್ಯಂಜನಗಳು. ಕ,ಚ,ಟ,ತ,ಪ, ಯ,ರ,ಲ,ವ... ಲ ತನಕ ಇರುವ ವರ್ಣಗಳನ್ನು ಹಲ್ ಎಂದು ಕರೆಯುತ್ತೇವೆ. ಈ ವ್ಯಂಜನಗಳು ಕೊನೆಯಲ್ಲಿರುವ ಪದಗಳನ್ನು ಹಲಂತ ಶಬ್ದಗಳು ಅಂತ ಕರೆಯುತ್ತೇವೆ. ಉದಾ: ಮರುತ್= ಮ್+ಅ+ರ್+ಉ+ತ್ ರಾಜನ್= ರ್+ಆ+ಜ್+ಅ+ನ್ ಆತ್ಮನ್= ಆ+ತ್+ಮ್+ಅ+ನ್ ಇವುಗಳಲ್ಲಿ ಬಹಳ ವಿಧಗಳಿವೆ: 1) ತಕಾರಾಂತ ಉದಾ: ಸಮಿತ್ 2) ನಕಾರಾಂತ ಉದಾ: ಆತ್ಮನ್, ರಾಜನ್ 3) ಸಕಾರಾಂತ ಉದಾ: ಮನಸ್ ಭಾಷೆಯಲ್ಲಿ ಶಬ್ದಗಳ ವಿಭಕ್ತಿಯಲ್ಲಿ ರೂಪಗಳ ...